Abstract
International Journal of Advance Research in Multidisciplinary, 2024;2(3):269-273
ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಚನೆ ಮತ್ತು ಕಾರ್ಯ ವಿಧಾನಗಳು
Author : ಡಾ. ಸ್ವಾಮಿ
Abstract
ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಶೋಷಿತ ಸಮುದಾಯಗಳಲ್ಲಿ ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿರುವ ಸಮುದಾಯಗಳ ಅಭಿವೃದ್ಧಿಗಾಗಿ ಮತ್ತು ಅವರನ್ನು ಸಾಮಾಜಿಕ ಸಮಾನತೆಯ ಕಡೆ ಕೊಂಡೊಯ್ಯಲು ಹಲವು ಯೋಜನೆಗಳ ಮೂಲಕ ಶ್ರಮಿಸುತ್ತಿದೆ. ಅ ಮೂಲಕ ಫಲಾನುಭವಿಗಳ ಜೀವನ ಕ್ರಮದ ಬದಲಾವಣೆಯ ಉದ್ದೇಶವನ್ನು ಹೊಂದಿದೆ. ಪರಿಶಿಷ್ಟ ಜಾತಿಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಉಪಜಾತಿಗಳನ್ನು ಈ ಯೋಜನೆಗಳಿಗೆ ಸಿಗುವಂತೆ ಮಾಡಲಾಗಿ. ಇದರಿಂದ ಅವರ ಆರ್ಥಿಕ ಸುಧಾರಣೆ, ಮಕ್ಕಳ ಶೈಕ್ಷಣಿಕ ಉನ್ನತಿ, ನಿರುದ್ಯೋಗ ನಿವಾರಣೆ ಮಾಡಲು, ಸಮುದಾಯದ ಯುವಕ ಮತ್ತು ಯುವತಿಯರನ್ನು ಸಬಲರನ್ನಾಗಿಸಲು ನಿಗಮವು ಹಲವಾರು ಯೋಜನೆಗಳನ್ನು ರೂಪಿಸಿದೆ. ಮಹಿಳಾ ಸಬಲೀಕರಣ ಯೋಜನೆಗಳ ಮೂಲಕ ಮಹಿಳೆಯು ಆರ್ಥಿಕ ಸಬಲತೆಯನ್ನು ಹೊಂದಬೇಕು, ಉದ್ಯೋಗ ಪಡೆಯಬೇಕು, ಸಮಾಜದ ಕಟ್ಟಳೆ ಮತ್ತು ದೌರ್ಜನ್ಯಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳಬೇಕು. ಸ್ವತಂತ್ರವಾಗಿ ಅವರು ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
Keywords
ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ, ಉದ್ದಿಮೆ, ಕೃಷಿ, ಗಣಿ À