Abstract
International Journal of Advance Research in Multidisciplinary, 2024;2(1):366-369
ಪ್ರಭುತ್ವ ಮತ್ತು ರೈತರ ಆತ್ಮಹತ್ಯೆಗಳು
Author : ದಾದಾಹಯಾತ್ ಬಾವಾಜಿ
Abstract
ಪ್ರಸ್ತುತ ಸರ್ಕಾರದ ಹೇಳಿಕೆಗಳನ್ನು ಗಮನಿಸುವುದಾದರೆ ರೈತರ ಬಗೆಗೆ ಪ್ರಭುತ್ವದ ಆಚರಣೆಗಳಲ್ಲಿ ದ್ವಂದ್ವ ನೀತಿಗಳನ್ನು ಅರಿತುಕೊಳ್ಳಬಹುದಾಗಿದೆ. ಸರ್ಕಾರ ಜಾರಿಗೆ ಬಂದ ನಂತರ ಕೇವಲ ಒಂದು ವರ್ಷದಲ್ಲಿ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳುವ ಸರ್ಕಾರವು ನಂತರ ತಮ್ಮ ಅಧಿಕಾರಾವಧಿಯಲ್ಲಿ ಈ ವರದಿಯ ಅನುಷ್ಠಾನದಿಂದ ಮಾರುಕಟ್ಟೆಯು ನಾಶವಾಗುವುದರಿಂದ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವುದು ಅಸಾಧ್ಯ ಎಂದು ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸುತ್ತದೆ ಮತ್ತು ಆರ್.ಟಿ.ಐ.ನಲ್ಲೂ ಇದೇ ಹೇಳಿಕೆಯನ್ನು ನೀಡುತ್ತದೆ. ಮತ್ತೊಬ್ಬ ಕೇಂದ್ರ ಕೃಷಿ ಮಂತ್ರಿ ನಾವು ಇಂತಹ ಭರವಸೆಯನ್ನೇ ನೀಡಿಲ್ಲ ಎಂದು ಹೇಳಿಕೆ ನೀಡುತ್ತಾರೆ. ನಂತರ ಮತ್ತೆ ಕೇಂದ್ರ ಹಣಕಾಸು ಮಂತ್ರಿಗಳು ಬಜೆಟ್ ಮಂಡನೆಯ ಸಂಧರ್ಭದಲ್ಲಿ ನಾವು ಈ ರೀತಿ ಭರವಸೆಯನ್ನು ರೈತರಿಗೆ ನೀಡಿದ್ದೆವು, ಅದರಂತೆ ನಾವು ಈಗಾಗಲೇ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು ಭರವಸೆ ಈಡೇರಿಸಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಈ ಹೇಳಿಕೆಗಳು ಪ್ರಭುತ್ವದ ನೈಜತೆ ಮತ್ತು ಬಹುಸಂಖ್ಯಾತ ರೈತ ಸಮುದಾಯದ ಕುರಿತು ಅಸಡ್ಡೆಯನ್ನು ತೋರಿಸುತ್ತದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.
Keywords
ಪ್ರಭುತ್ವ, ರೈತ, ಕೃಷಿ, ಆತ್ಮಹತ್ಯೆಗಳು, ಸಾಲಬಾಧೆ, ಸ್ವಾಮಿನಾಥನ್ ವರದಿ