Abstract
International Journal of Advance Research in Multidisciplinary, 2024;2(4):69-73
ಒಣಭೂಮಿ ಬೇಸಾಯದ ಬೆಳೆಗಳ ಉತ್ಪಾದನೆ
Author : ಡಾ. ಬಸವರಾಜ ಯು
Abstract
ಕೃಷಿಬೆಳೆಗಳ ಉತ್ಪಾದನೆಯು ಬಿತ್ತನೆಯ ಪ್ರದೇಶ ಹಾಗೂ ಅದಕ್ಕೆ ಪೋಷಕಾಂಶಗಳನ್ನು ಹೊದಗಿಸುವುದರ ಮೇಲೆ ಬೆಳೆಯನ್ನು ಅಂದಾಜಿಸಬಹುದು. ಅಧಿಕ ಪ್ರಮಾಣದ ಇಳಿವರಿಯನ್ನು ಪಡೆಯಲು ಅವಧಿಗೆ ಸರಿಯಾಗಿ ನೀರನ್ನು ಹೊದಗಿಸಿ ಗೊಬ್ಬರ, ಕಳೆತೆಗೆಯುವುದು, ಹಾಗೂ ಸರಿಯಾದ ಸಮಯಕ್ಕೆ ಬೆಳೆಯನ್ನು ಕಟಾವು ಮಾಡಿದರೆ ಉತ್ತಮವಾದ ಫಲವನ್ನು ಪಡೆಯಬಹುದಾಗಿದೆ. ಅದರೆ ಒಣಭೂಮಿ ಬೇಸಾಯದಲ್ಲಿ ಅದಕ್ಕೆ ವಿಧಾನವನ್ನು ಬಳಸಬೇಕಾಗಿದೆ. ಕಾರಣ ಮಳೆಯನ್ನು ಅವಲಂಭಿಸಿ ಬೆಳೆಯನ್ನು ಬೆಳೆಯುವಂತಹ ಒಂದು ಕೃಷಿ ವಿಧಾನವಾಗಿದ್ದು ಮಳೆಯು ಈ ಕೃಷಿಯ ಮುಖ್ಯ ಭೂಮಿಕೆಯಾಗಿದೆ. ಮಳೆಯಯ ವರ್ಷದಲ್ಲಿ ಇಂತಿಷ್ಟೆ ದಿನ ಬರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ ಏಕೆಂದರೆ ಅನಿಶ್ಚಿತವಾದ ರೀತಿಯಲ್ಲಿ ಮಳೆ ಬರುತ್ತೆದೆ ಒಂದು ವರ್ಷ ಉತ್ತಮವಾದ ಮಳೆ ಬಂದರೆ ನಂತರ ವರ್ಷವು ಬರ ಅಥವಾ ಕ್ಷಾಮವು ಬರುವಂತಹ ಸಂದರ್ಭವನ್ನು ಕಾಣುತ್ತೇವೆ. ಅದೇ ರೀತಿಯಾಗಿ ಕಾಡು ದಟ್ಟವಾಗಿರುವ ಕಡೆ ಮಳೆಯು ಹೆಚ್ಚಾಗಿ ಬಂದು ಕಾಡು ಕಡಿಮೆ ಮಳೆಯು ಬರೆದೆ ಇರುವಂತಹ ಸಂದರ್ಭವು ಇರುವುದು ಕಾಣಲಾಗುತ್ತದೆ. ಕೃಷಿಯಲ್ಲಿ ಬೆಳೆಗಳನ್ನು ಅವುಗಳ ಬೆಳವಣಿಗೆ ಹಾಗೂ ಬಳಕೆಯ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿದೆ. ಏಕದಳ, ದ್ವಿದಳ, ಎಣ್ಣೆಕಾಳುಗಳು, ಸಿರಿಧ್ಯಾನಗಳು ಇನ್ನೂ ಮುಂತಾದವುಗಳಾಗಿ ವಿಂಗಡಿಸಲಾಗಿದೆ. ಅವುಗಳ ಇಳುವರಿ ಮತ್ತು ಉತ್ಪಾದನೆ ಮಾಹಿತಿಯು ಈ ಮುಂದಿನAತಿದೆ.
Keywords
ಕೃಷಿ, ಬೆಳೆಗಳು, ಉತ್ಪಾದನೆ, ಇಳುವರಿ, ಹೆಕ್ಟೇರ್‌ಗಳು