Email : editor.ijarmjournals@gmail.com

ISSN : 2583-9667, Impact Factor: 6.49

Contact : +91 7053938407

Email editor.ijarmjournals@gmail.com

Contact : +91 7053938407

Abstract

International Journal of Advance Research in Multidisciplinary, 2025;3(3):302-304

ಕವಿ ರನ್ನ ಚಿತ್ರಿಸಿದ ದುರ್ಯೋಧನನ ಪಾತ್ರ

Author : ಡಾ. ಮಂಜುನಾಥ ಎಂಎಂ

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೆಯ ಶತಮಾನವು ರಾಜಕೀಯವಾಗಿ ಕ್ಷಾತ್ರಯುಗವಾಗಿದ್ದರೂ ಸಾಹಿತ್ಯದ ದೃಷ್ಟಿಯಿಂದ ಸ್ವರ್ಣಯುಗವೆಂದು ಪರಿಗಣಿಸಲ್ಪಟ್ಟಿದೆ. ಈ ಯುಗದಲ್ಲಿ ಪಂಪ, ಪೊನ್ನ, ರನ್ನ ಎಂಬ ಮಹಾಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರಲ್ಲಿ ಕವಿ ರನ್ನನು ರಚಿತವಾದ ಸಾಹಸ ಭೀಮ ವಿಜಯ ಅಥವಾ ಗದಾಯುದ್ಧ ಕೃತಿ ಕನ್ನಡ ಮಹಾಕಾವ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಮಹಾಭಾರತದ ಕೊನೆಯ ಅರ್ಧ ದಿನದ ಭೀಮ–ದುರ್ಯೋಧನರ ಗದಾಯುದ್ಧವನ್ನು ಆಧಾರವಾಗಿಟ್ಟುಕೊಂಡ ಈ ಚಂಪೂಕಾವ್ಯದಲ್ಲಿ ರನ್ನನು ವೀರ, ರೌದ್ರ ಮತ್ತು ಕರುಣ ರಸಗಳ ಸಮನ್ವಯವನ್ನು ಅಪೂರ್ವವಾಗಿ ನಿರ್ವಹಿಸಿದ್ದಾನೆ. ವಿಶೇಷವಾಗಿ ದುರ್ಯೋಧನನ ಪಾತ್ರಚಿತ್ರಣದಲ್ಲಿ ರನ್ನನು ಅವನ ವೀರತ್ವ, ಛಲ, ಅಭಿಮಾನ, ಪಿತೃಭಕ್ತಿ, ಸ್ನೇಹ, ಪುತ್ರವಾತ್ಸಲ್ಯ ಹಾಗೂ ಆಂತರಿಕ ದ್ವಂದ್ವಗಳನ್ನು ಸೂಕ್ಷ್ಮ ಮನೋವೈಜ್ಞಾನಿಕ ದೃಷ್ಟಿಯಿಂದ ಚಿತ್ರಿಸಿದ್ದಾನೆ. ಇದರಿಂದ ದುರ್ಯೋಧನನು ಕೇವಲ ದುಷ್ಟನಾಗಿ ಮಾತ್ರವಲ್ಲ, ಮಾನವೀಯ ಮೌಲ್ಯಗಳನ್ನು ಹೊಂದಿದ ದುರಂತ ನಾಯಕನಾಗಿ ರೂಪುಗೊಂಡಿದ್ದಾನೆ. ಈ ಲೇಖನವು ಗದಾಯುದ್ಧ ಕಾವ್ಯದಲ್ಲಿ ರನ್ನನ ಪಾತ್ರಸೃಷ್ಟಿ, ರಸಪ್ರತಿಪಾದನೆ, ನಾಟಕೀಯತೆ ಹಾಗೂ ಪ್ರತಿನಾಯಕನಾದ ದುರ್ಯೋಧನನ ವ್ಯಕ್ತಿತ್ವದ ಬಹುಮುಖ ಚಿತ್ರಣವನ್ನು ವಿಶ್ಲೇಷಿಸಿ, ರನ್ನನನ್ನು ಶಕ್ತಿಕವಿ, ಗಂಡುಕವಿ ಮತ್ತು ಮನಃಶಾಸ್ತ್ರಜ್ಞನಾಗಿ ಗುರುತಿಸುತ್ತದೆ.

Keywords

ರನ್ನ, ಗದಾಯುದ್ಧ, ಸಾಹಸ ಭೀಮ ವಿಜಯ, ದುರ್ಯೋಧನ ಪಾತ್ರಚಿತ್ರಣ, ಕ್ಷಾತ್ರಯುಗ, ಕನ್ನಡ ಮಹಾಕಾವ್ಯ, ವೀರರಸ, ಪ್ರತಿನಾಯಕ, ರಸಪ್ರತಿಪಾದನೆ, ಹತ್ತನೆಯ ಶತಮಾನ