Article Abstract
International Journal of Advance Research in Multidisciplinary, 2024;2(1):361-365
ಸವದತ್ತಿ ಎಲ್ಲಮ್ಮ: ಹೆಣ್ಣು ಮಕ್ಕಳ ಅರ್ಪಣೆಯ ಹಿನ್ನೆಲೆ
Author : ಪಂಪಾಪತಿ ವಿ
Abstract
ದೇವಾಲಯಗಳಿಗೆ ಸೇವೆ ಸಲ್ಲಿಸುವ ಆಚರಣೆಯು ಬಹುಹಿಂದಿನಿಂದಲೂ ಬೆಳೆದುಬಂದಿತ್ತು. ಪೆನ್ಸರ್ ಉಲ್ಲೇಖಿಸುವಂತೆ ಗುಜರಾತ್ ಪ್ರಾಂತ್ಯದಲ್ಲಿ 20 ಸಾವಿರ ಹೆಣ್ಣು ಮಕ್ಕಳು ಬೌದ್ಧ ದೇವಾಲಯಗಳಿದ್ದು ಬುದ್ಧ ವಿಗ್ರಹಕ್ಕೆ ನೈವೇದ್ಯ ಹಾಗೂ ಪುಷ್ಪಗಳನ್ನು ಏರಿಸುವ ಹೊತ್ತಿನಲ್ಲಿ ಹಾಡಬೇಕಾಗಿತ್ತು. ಈ ಮಧ್ಯೆ ಇವೆಲ್ಲದರಿಂದ ಬೇರೆಯಾದ ಸಂದರ್ಭ ಒಂದಿದೆ. ಮೊಗಲ್ ಸಾಮ್ರಾಜ್ಯದ ಔರಂಗಜೇಬನಿಗೆ ಕಲಾಶಕ್ತಿ ಇಲ್ಲದ ಕಾರಣ ಒಂದು ಅನುಕೂಲವಾಯಿತು. ಅರಸ ಒಂದು ಸನ್ನದು ಹೊರಡಿಸಿ ಹೆಣ್ಣು ಮಕ್ಕಳು ಹಾಡಿ ನರ್ತಿಸುವುದನ್ನು ನಿಷೇಧಿಸಿದನಲ್ಲದೆ, ಅಂತಹ ಹೆಣ್ಣು ಮಕ್ಕಳಿಗೆ ಮದುವೆಯಾಗಬೇಕೆಂದು ಶಿಕ್ಷೆ ವಿಧಿಸಿದ್ದನಂತೆ! ತಪ್ಪಿದರೆ ಸಾಮ್ರಾಜ್ಯದಿಂದ ಹೊರ ಹೋಗಬೇಕೆಂದು ಸಾರಿದನಂತೆ. ಪೂರ್ವ ಭಾರತದಲ್ಲಿ ಒರಿಸ್ಸಾದ ಜಗನ್ನಾಥ ದೇವಾಲಯದಲ್ಲಿ ಸುಮಾರು 9ನೇ ಶತಮಾನದ ಹೊತ್ತಿಗೆ ದೇವರೆದುರು ನರ್ತಿಸುತ್ತಿದ್ದ ನರ್ತಕಿಯರು ಬಿಡುವಿನಲ್ಲಿ ತಮ್ಮಿಚ್ಛೆ ಬಂದವರೊಡನೆ ರಮಿಸುತ್ತಿದ್ದರ ಐತಿಹಾಸಿಕ ದಾಖಲೆಗಳಿವೆ. ಕ್ರಿ.ಶ. 1029ರಲ್ಲಿ ಚೀನಿ ಯಾತ್ರಿಕನೊಬ್ಬನು ದಾಖಲಿಸಿದಂತೆ ಮಲಬಾರಿನ ತಿರುವಾಂಕೂರಿನಲ್ಲಿ ತಂದೆ ತಾಯಿಗಳೇ ಸ್ವಪ್ರೇರಣೆಯಿಂದ ಮಕ್ಕಳನ್ನು ದೇವಿಗೆ ಅರ್ಪಿಸುತ್ತಿದ್ದರು. ವಿದ್ಯುಕ್ತ ಆಚರಣೆಯ ನಂತರ ದೇವರ ಪ್ರತಿನಿಧಿ ಎಂದರೆ ಪೂಜಾರಿಯೊಂದಿಗೆ ಅವರು ರಮಿಸಬೇಕಿತ್ತು. ಉತ್ತರ ಭಾರತವು ವಿದೇಶಿ ಶಕ್ತಿಗಳಿಗೆ ಹಾಗೂ ಪ್ರಭಾವಗಳಿಗಾಗಿ ಹೆಚ್ಚಾಗಿ ಪಕ್ಕಾದ್ದರಿಂದ ಅಲ್ಲಿಗಿಂತ ದಕ್ಷಿಣ ಭಾರತದಲ್ಲಿ ದೇವದಾಸಿಯರ ಪಾತ್ರ ಪ್ರಧಾನವಾಗಿ ಕಾಣುತ್ತದೆ ಎಂಬುದು ಇತಿಹಾಸಕರ ಹಾಗೂ ಸಂಸ್ಕೃತಿಶಾಸ್ತ್ರಜ್ಞರ ಅಭಿಮತ.
Keywords
ಸಂಸ್ಕೃತಿ, ಸ್ತ್ರೀದೈವ, ದೇವದಾಸಿ, ಆಚರಣೆ, ಮೌಢ್ಯ, ಸರ್ಕಾರ, ಜಾತ್ರೆ, ಶಿಕ್ಷಣ