Article Abstract
International Journal of Advance Research in Multidisciplinary, 2024;2(4):79-82
ಬಳ್ಳಾರಿಜಿಲ್ಲೆಯ ಕೃಷಿಯಲ್ಲಿ ಒಣಭೂಮಿ ಬೇಸಾಯದ ಪಾತ್ರ
Author : ಡಾ. ಬಸವರಾಜ ಯು
Abstract
ಬಳ್ಳಾರಿ ಜಿಲ್ಲೆ, ಕರ್ನಾಟಕದ ಪೂರ್ವ ಮೇರೆಯನ್ನು ಪಡೆದುಕೊಂಡು ಮಧ್ಯ ಭಾಗದಲ್ಲಿ ನೆಲೆಗೊಂಡಿದೆ. ೧೯೫೩ರಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಹಯೋಗದಲ್ಲಿ ನಿರ್ಮಾಣವಾದ ತುಂಗಾಭದ್ರ ನದಿ ಜಿಲ್ಲೆಯ ನೈಸರ್ಗಿಕ ಮೇರೆಯಾಗಿದ್ದು. ಅದು ಪಶ್ಚಿಮದಲ್ಲಿ ಕೊಪ್ಪಳ ಜಿಲ್ಲೆಯನ್ನು ಹಾಗೂ ಉತ್ತರದಲ್ಲಿ ರಾಯಚೂರು ಜಿಲ್ಲೆಯನ್ನು ಪ್ರತ್ಯೇಕಿಸುತ್ತದೆ. ತುಂಗಾಭದ್ರ ನದಿಯ ಹೃದಯ ಭಾಗದಲ್ಲಿ ಸುಮಾರು ೫೦.ಕಿ.ಮೀ. ದೂರದವರಿಗೆ ಹರಡಿದೆ. ಬಳ್ಳಾರಿ ಜಿಲ್ಲೆಯ ಈ ನದಿಯ ಬಲದಂಡೆಯ ಮೇಲೆ ನೆಲೆಗೊಂಡಿದ್ದು. ಇದು ಜಿಲ್ಲೆಯ ಉತ್ತರದ ಮೇರೆಯನ್ನು ನಿಗಧಿಪಡಿಸುತ್ತದೆ. ಇಂತಹ ದಂಡೆಯ ಮೇಲೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಪಟ್ಟಣವು ನೆಲೆಗೊಂಡಿದೆ. ಇಂತಹ ಐತಿಹಾಸಿಕ ಹಿನ್ನಲೆಯಿಂದಾಗಿ ಎಲ್ಲಾ ಋತುಮಾನಗಳಲ್ಲಿ ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿ ಪ್ರವಾಸೋದ್ಯಮ ತಾಣವಾಗಿ ಮಾರ್ಪಟ್ಟಿದೆ. ಜಿಲ್ಲೆಯ ಸಂಡೂರು ತಾಲ್ಲೂಕಿನ ಎತ್ತರವಾದ ಬೆಟ್ಟ ಗುಡ್ಡಗಳು ಸಮುದ್ರದ ಮಟ್ಟದಿಂದ ೨೪೦೦ ಅಡಿ ಎತ್ತರದಲ್ಲಿವೆ. ಬಳ್ಳಾರಿ ಜಿಲ್ಲೆ ಕರ್ನಾಟಕ ರಾಜ್ಯದ ಪೂರ್ವಭಾಗದ ಮಧ್ಯದಲ್ಲಿದ್ದು ದಕ್ಷಿಣೋತ್ತರವಾಗಿ ಹಬ್ಬಿಕೊಂಡಿದೆ. ಇದು ೧೪-೧೩ ಮತ್ತು ೧೫-೫೦ ಉತ್ತರ ಅಕ್ಷಾಂಶ ಹಾಗೂ ೭೫-೪೦ ಮತ್ತು ೭೭-೧೧ ಪೂರ್ವ ರೇಖಾಂಶಗಳ ಮಧ್ಯದಲ್ಲಿದೆ. ಈ ಜಿಲ್ಲೆಯ ಉತ್ತರವಾಗಿ ರಾಯಚೂರು ಜಿಲ್ಲೆ, ಪಶ್ಚಿಮದಲ್ಲಿ ಹಾವೇರಿ ಜಿಲ್ಲೆ, ದಕ್ಷಿಣದಲ್ಲಿ ಚಿತ್ರದುರ್ಗ ಜಿಲ್ಲೆ ಹಾಗೂ ಪೂರ್ವ ಭಾಗದಲ್ಲಿ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ ಮತ್ತು ಅನಂತಪುರ ಜಿಲ್ಲೆಗಳಿಂದ ಸುತ್ತುವರೆದಿz.
Keywords
ಕೃಷಿ, ಒಣಭೂಮಿ ಬೇಸಾಯ, ನೀರಾವರಿ, ಭೂ ಬಳಕೆ, ಬಿತ್ತನೆಯ ಭೂ ಪ್ರದೇಶ