Email : editor.ijarmjournals@gmail.com

ISSN : 2583-9667, Impact Factor: 6.49

Contact : +91 7053938407

Email editor.ijarmjournals@gmail.com

Contact : +91 7053938407

Article Abstract

International Journal of Advance Research in Multidisciplinary, 2025;3(4):181-185

ಛಲವಾದಿ ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಚರಣೆಗಳು

Author : ಮಹೇಶ್ವರಿ ಸಿ.ಎಂ.

Abstract

ಛಲವಾದಿ ಸಮುದಾಯವು ಕರ್ನಾಟಕದ ಪ್ರಮುಖ ದಲಿತ ಸಮುದಾಯಗಳಲ್ಲಿ ಒಂದಾಗಿದ್ದು, ತನ್ನದೇ ಆದ ವಿಶಿಷ್ಟ ಸಂಸ್ಕೃತಿ, ಆಚರಣೆಗಳು ಮತ್ತು ಸಾಮಾಜಿಕ ಮೌಲ್ಯಗಳನ್ನು ಹೊಂದಿದೆ. ಇತಿಹಾಸಾತ್ಮಕವಾಗಿ ಸಾಮಾಜಿಕ ಅಸಮಾನತೆ ಮತ್ತು ಶೋಷಣೆಯನ್ನು ಅನುಭವಿಸಿದರೂ, ಈ ಸಮುದಾಯವು ತನ್ನ ಸಂಪ್ರದಾಯಗಳು ಮತ್ತು ಆಚರಣೆಗಳ ಮೂಲಕ ಸಂಸ್ಕೃತಿಕ ಗುರುತು ಮತ್ತು ಸಾಮಾಜಿಕ ಒಗ್ಗಟ್ಟನ್ನು ಉಳಿಸಿಕೊಂಡು ಬಂದಿದೆ. ಛಲವಾದಿ ಸಮುದಾಯದ ಆಚರಣೆಗಳು ಕೇವಲ ಧಾರ್ಮಿಕ ವಿಧಿವಿಧಾನಗಳಷ್ಟೇ ಅಲ್ಲದೆ, ಸಮುದಾಯದ ಶ್ರಮಾಧಾರಿತ ಜೀವನಶೈಲಿ, ಸಮಾನತೆಯ ತತ್ವ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ.

ಈ ಲೇಖನದಲ್ಲಿ ಛಲವಾದಿ ಸಮುದಾಯದ ಧಾರ್ಮಿಕ ಆಚರಣೆಗಳು, ಹಬ್ಬಗಳು, ಜಾತ್ರೆಗಳು, ಜೀವನಚಕ್ರ ಸಂಬAಧಿತ ವಿಧಿಗಳು ಮತ್ತು ಜನಪದ ಕಲಾರೂಪಗಳನ್ನು ವಿವರಣಾತ್ಮಕವಾಗಿ ವಿಶ್ಲೇಷಿಸುತ್ತದೆ. ಈ ಆಚರಣೆಗಳು ಸಮುದಾಯದ ಸದಸ್ಯರಲ್ಲಿ ಸಹಕಾರ, ಸಹೋದರತ್ವ ಮತ್ತು ಸಾಮಾಜಿಕ ಏಕತೆಯನ್ನು ಬೆಳೆಸುವಲ್ಲಿ ಹೇಗೆ ಪಾತ್ರವಹಿಸುತ್ತವೆ ಎಂಬುದನ್ನು ಲೇಖನ ಸ್ಪಷ್ಟಪಡಿಸುತ್ತದೆ. ಒಟ್ಟಿನಲ್ಲಿ, ಛಲವಾದಿ ಸಮುದಾಯದ ಆಚರಣೆಗಳು ಸಮುದಾಯದ ಸಂಸ್ಕೃತಿಕ ಆತ್ಮಗೌರವವನ್ನು ಕಾಪಾಡುವ ಜೊತೆಗೆ, ದಲಿತ ಅಧ್ಯಯನದಲ್ಲಿ ಮಹತ್ವದ ಸಂಶೋಧನಾ ವಿಷಯವಾಗಿವೆ ಎಂಬುದನ್ನು ಈ ಲೇಖನ ನಿರೂಪಿಸುತ್ತz.

Keywords

ಛಲವಾದಿ ಸಮುದಾಯ, ಸಾಂಸ್ಕೃತಿಕ ಗುರುತು, ದಾರ್ಮಿಕ ಆಚರಣೆಗಳು, ಸಾಮಾಜಿಕ ಏಕತೆ, ದಲಿತ ಅಧ್ಯಯನ.