Article Abstract
International Journal of Advance Research in Multidisciplinary, 2023;1(2):327-329
ಅನೈತಿಕ ವ್ಯವಹಾರ ಅಧಿನಿಯಮ ೧೯೫೬: ಒಂದು ವಿಮರ್ಶೆ
Author : ಪಂಪಾಪತಿ ವಿ
Abstract
ಅನೈತಿಕ ವ್ಯವಹಾರ ಅಧಿನಿಯಮ ೧೯೫೬ ಭಾರತ ಸರ್ಕಾರ ವೇಶ್ಯಾ ಸಮಸ್ಯೆಯನ್ನು ನಿರ್ಮೂಲನೆಗೊಳಿಸಲು ಮಾಡಿದ ಕಾನೂನಾಗಿದೆ. ೧೯೮೭ರಲ್ಲಿ ಈ ಅಧಿನಿಯಮಕ್ಕೆ ತಿದ್ದುಪಡಿ ತಂದು ಪ್ರಿವೆನ್ನನ್ ಆಫ್ ಇಮ್ಮಾರಲ್ ಟ್ರಾಫಿಕ್ ಆಕ್ಟ್ ೧೯೫೬ ಎಂಬುದಾಗಿ ಮಾರ್ಪಡಿಸಿ ಇನ್ನಷ್ಟು ಬಲಗೊಳಿಸಲಾಗಿದೆ. ಈ ಕಾಯಿದೆಯನ್ನು ಮಹಿಳೆಯರು ಎದುರಿಸುತ್ತಿರುವ ವೇಶ್ಯಾಸಮಸ್ಯೆಯ ನಿವಾರಣಾ ಉದ್ದೇಶವಿಟ್ಟುಕೊಂಡು ರಚಿಸಲಾಗಿದೆ. ವಯಸ್ಸಿಗೆ ಬಂದ ಯುವತಿಯರು ವೇಶ್ಯೆಯರಾಗಬಾರದು. ವಯಸ್ಸಿಗೆ ಬಂದ ಹುಡುಗರು ವಿಟರಾಗಬಾರದು ಮತ್ತು ಬದುಕಲು ಹೆಣ್ಣಾಗಲಿ, ಗಂಡಾಗಲಿ ವೇಶ್ಯಾವೃತ್ತಿಯನ್ನು ಅವಲಂಬಿಸಬಾರದು. ವೇಶ್ಯಾವೃತ್ತಿ ಮಾಡುವವಳು ಹೆಣ್ಣಾದರು ಅವಳ ಹಿಂದೆ ಇರುವ ದಲ್ಲಾಳಿಗಳು, ಏಜೆಂಟರು, ತಲೆಹಿಡುಕರು, ವೇಶ್ಯಾ ಗೃಹಗಳ ಮಾಲೀಕರು ಈ ವೃತ್ತಿಯನ್ನು ಅತ್ಯಂತ ಜೀವಂತವಾಗಿಟ್ಟುಕೊಂಡು ತಮ್ಮ ಬೆಳವಣಿಗೆ ಮೆಟ್ಟಿಲಾಗಿಸಿಕೊಳ್ಳುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
Keywords
ಪರಿಹಾರ, ಕಾನೂನು, ತರಬೇತಿ, ಪುನರ್ವವಸತಿ, ಎನ್.ಜಿ.ಓ, ಪೊಲೀಸ್, ದಂಡ ಸಂಹಿತೆ