Email : editor.ijarmjournals@gmail.com

ISSN : 2583-9667, Impact Factor: 6.038

Contact : +91 9315510518

Email editor.ijarmjournals@gmail.com

Contact : +91 9315510518

Article Abstract

International Journal of Advance Research in Multidisciplinary, 2023;1(1):580-584

ಸ್ತ್ರೀಯರ ಆರೋಗ್ಯ ಮತ್ತು ಪೌಷ್ಟಿಕತೆ: ಸಾಧ್ಯತೆ-ಸವಾಲುಗಳು

Author : ಪಂಪಾಪತಿ ವಿ

Abstract

ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯವನ್ನು ಕಾಯಿಲೆ ಮತ್ತು ದೈಹಿಕ ದೌರ್ಬಲ್ಯದಿಂದ ಮುಕ್ತವಾಗಿರುವುದಷ್ಟೇ ಅಲ್ಲ ಶಾರೀರಿಕ, ಮಾನಸಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಹೊಂದಿರುವುದು ಎಂದು ವ್ಯಾಖ್ಯಾನಿಸುತ್ತದೆ. ಜನರ ಆರೋಗ್ಯ ಮಟ್ಟ ಒಂದು ಸಮಾಜದ ಸ್ಥಾನವನ್ನು ಸೂಚಿಸುತ್ತದೆ. ಅದರಲ್ಲೂ ಮಹಿಳೆಯರ ಆರೋಗ್ಯ ಸ್ಥಿತಿ ಸಮಾಜದ ಸ್ವಾಸ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಸ್ತ್ರೀಯರ ಸಂತಾನೋತ್ಪತ್ತಿ ಕಾರ್ಯ, ಅವರ ಶಾರೀರಿಕ ಮತ್ತು ಮಾನಸಿಕ ವಿಷಯಗಳ ಬಗ್ಗೆ ಸಮಾಜವು ಹೊಂದಿರುವ ಮನೋಭಾವ ಇವೆರಡು ಮಹಿಳೆಯರು ಸಮಾಜದಲ್ಲಿ ಹೊಂದಿರುವ ಸ್ಥಾನ, ಪಾತ್ರಗಳನ್ನು ನಿರ್ಧರಿಸುತ್ತವೆ. ಅವರ ಸ್ಥಾನ ಮತ್ತು ಪಾತ್ರಗಳು ಅವರಿಗೆ ದೊರಕುವ ಆರೈಕೆ ಔಷಧೋಪಚಾರ ಮತ್ತು ಅನಾರೋಗ್ಯವನ್ನು ತಡೆಯಲು ಕೈಗೊಳ್ಳುವ ಕ್ರಮಗಳು ಯಾವುವು, ಹೇಗಿರಬೇಕು ಎಂಬುದನ್ನು ನಿರ್ಣಯಿಸುತ್ತವೆ. ತಾಯ್ತನಕ್ಕೆ ಸಂಬಂಧಿಸಿದ ಸೇವಾ ಸೌಲಭ್ಯಗಳನ್ನು ಎಷ್ಟರ ಮಟ್ಟಿಗೆ ಒದಗಿಸಿದೆ ಎಂಬುದು ಸಮಾಜವು ಅವರ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತದೆ ಎನ್ನುವುದನ್ನು ತೋರಿಸುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸ್ತ್ರೀಯರ ಕೆಳಮಟ್ಟದ ಸ್ಥಾನಕ್ಕೂ ಮತ್ತು ಆರೋಗ್ಯ ಸೇವಾ ಸೌಲಭ್ಯಗಳಿಗು ನೇರ ಸಂಬಂಧವಿರುವುದು ಕಂಡುಬರುತ್ತದೆ.

Keywords

ಆರೋಗ್ಯ, ಅಪೌಷ್ಟಿಕತೆ, ಚಿಕತ್ಸೆ, ಔಷಧಿ, ಸುಧಾರಣೆ, ಕಾಳಜಿ, ಬಡತನ, ಸೇವಾ ಸೌಲಭ್ಯಗಳು, ಪೋಷಣೆ, ಅನಭಿವೃದ್ಧಿ, ಜೀವಿತಾವದಿ